ಎಸ್ ಎನ್ ಸೇತುರಾಂ

ರಂಗ ಭೂಮಿಯನ್ನೇ ತಮ್ಮ ಜೀವನಾಡಿಯಾಗಿಸಿಕೊಂಡು. "ನಿಮಿತ್ತ", "ಗತಿ", "ಅತೀತ" ಹೀಗೆ ಹಲವಾರು ನಾಟಕಗಳನ್ನು ಜನರಿಗೆ ಬಳುವಳಿಯಾಗಿ ನೀಡಿ...ಅಷ್ಟಕ್ಕೇ ಸೀಮಿತವಾಗದೆ ಅನೇಕ ಟಿವಿ ಸೀರಿಯಲ್ ಗಳಲ್ಲಿ ನಟಿಸಿ,ಕನ್ನಡದ ಜ್ಯೋತಿಯನ್ನು ಬೆಳಗಿದವರು,ಮೇರು ನಟ,ನಿರ್ದೇಶಕ,ಅನರ್ಘ್ಯ ರತ್ನ "ಸೇತುರಾಮ್"ರವರು 2018ರ ಕನ್ನಡ ಹಬ್ಬ "ಅಂಬಾರಿ"ಯ ಗಣ್ಯ ವೇದಿಕೆಯನ್ನು ಅಲಂಕರಿಸಿದ್ದರು.

ಹೆಚ್ಚಿನ ಮಾಹಿತಿ

ಪ್ರೊ .ಕೃಷ್ಣೇಗೌಡ

ಕನ್ನಡದ ಬಗ್ಗೆ ಅಪಾರ ಗೌರವ ಕಾಳಜಿ ಹೊಂದಿರುವ ಶ್ರೀಯುತ ಕೃಷ್ಣೇಗೌಡರು ತಮ್ಮ ವಿಭಿನ್ನ ಶೈಲಿಯ ಹಾಸ್ಯದ ಮೂಲಕ ಜನರ ಮೊಗದಲ್ಲಿ ಮಂದಹಾಸ ಮೂಡಿಸುತ್ತ ಬಂದಿದ್ದಾರೆ... ದೇಶ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಇವರ ಕಾರ್ಯಕ್ರಮಗಳು ಮನಸೂರೆಗೊಂಡಿದೆ..


ಅನಂತ್ ನಾಗರಕಟ್ಟೆ

ಅನಂತನಾಗ್ ಅವರು ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು. ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್. ಇವರಿಬ್ಬರೂ ಚಲನಚಿತ್ರರಂಗದಲ್ಲಿ, ಸಕ್ರಿಯರಾಗಿದ್ದವರು.ಚಿತ್ರರಂಗದಲ್ಲಿ ಅವರಿವರನ್ನು ‘ಓ, ಅವರು ಪಂಚ ಭಾಷಾ ತಾರೆ ಎಂದು ಕೆಲವರನ್ನು ಕರೆಯುವುದುಂಟು’. ಅನಂತನಾಗ್ ಸಪ್ತಭಾಷಾ ತಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜೃಂಭಿಸಿದ್ದಾರೆ.

ಹೆಚ್ಚಿನ ಮಾಹಿತಿ

ಸಿ ಅಶ್ವತ್ಥ್

ಸಿ ಅಶ್ವತ್ಥ್ - (೧೯೩೯) ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ. ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊನೆಗೆ ೧೯೯೨ರಲ್ಲಿ ನಿವೃತ್ತಿ ಪಡೆದರು. ಚಿಕ್ಕವರಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ ಇವರು ಹಿಂದೂಸ್ಥಾನೀ ಸಂಗೀತವನ್ನು ದೇವಗಿರಿ ಶಂಕರರಾವ್ ಅವರ ಬಳಿ ಕಲಿತು, ನಂತರ ನಾಟಕಗಳಿಗೆ ಸಂಗೀತ ನೀಡಿದರು. ಕಾಕನಕೋಟೆ ಚಿತ್ರದ ಮೂಲಕ ಚಿತ್ರ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು ಮೂತ್ರಪಿಂಡ ಹಾಗೂ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದ ಇವರು ಡಿಸೆಂಬರ್ ೨೯, ೨೦೦೯ ರಂದು, ತಮ್ಮ ೭೧ನೇ ಜನ್ಮದಿನದಂದೇ ಕೊನೆಯುಸಿರೆಳೆದರು.

ಹೆಚ್ಚಿನ ಮಾಹಿತಿ

ಮಾಸ್ಟರ್ ಹಿರಣ್ಣಯ್ಯ

ಮಾಸ್ಟರ್ ಹಿರಣ್ಣಯ್ಯ (ಫೆಬ್ರುವರಿ ೧೫, ೧೯೩೪) ಕನ್ನಡ ರಂಗಭೂಮಿ ಕಂಡ ಮಹಾನ್ ಕಲಾವಿದರು. ತಮ್ಮ ವಿಡಂಭನಾತ್ಮಕ ವಾಗ್ವೈಕರಿ, ಅಭಿನಯ, ನಿರೂಪಣೆಗಳಿಂದ ಕನ್ನಡ ನಾಡಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ. ಇವೆಲ್ಲಕ್ಕೂ ಮಿಗಿಲಾಗಿ ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರ ನಾಟಕಗಳನ್ನೂ ಅವರನ್ನೂ ನಿರಂತರವಾಗಿ ಗೌರವಿಸಿದ್ದಾರೆ.

ಹೆಚ್ಚಿನ ಮಾಹಿತಿ

ಬಿ.ಜಯಶ್ರೀ

ಬಿ.ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ ಕಲಾವಿದ ಗುಬ್ಬಿ ವೀರಣ್ಣನವರ ಮೊಮ್ಮಗಳು. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಂಡ ಅಪೂರ್ವ ಕಲಾವಿದರಲ್ಲಿ ಬಿ. ಜಯಶ್ರೀ ಒಬ್ಬರು. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮಾಧ್ಯಮಗಳಲ್ಲಿ ತಮ್ಮ ಛಾಪು ಮೂಡಿಸಿರುವ ಅವರು, ‘ಗುಬ್ಬಿ ವೀರಣ್ಣನವರ ಮೊಮ್ಮಗಳು’ ಎನ್ನುವ ‘ವಿಶೇಷಣ’ದ ಆಚೆಗೆ ಸಾಧನೆಯಿಂದ ಗುರ್ತಿಸಿಕೊಂಡವರು. ‘ರಂಗಾಯಣ’ದ ಮುಖ್ಯಸ್ಥರಾಗಿ, ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಜಯಶ್ರೀ ತಮ್ಮ ಅಪೂರ್ವ ಕಂಠಸಿರಿಯಿಂದಲೂ ಪ್ರಸಿದ್ಧರು.

ಹೆಚ್ಚಿನ ಮಾಹಿತಿ

ಚಂದ್ರಶೇಖರ ಕಂಬಾರ

ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.

ಹೆಚ್ಚಿನ ಮಾಹಿತಿ

ಎಂ. ಡಿ. ಪಲ್ಲವಿ

ಎಂ. ಡಿ. ಪಲ್ಲವಿ, ಕರ್ನಾಟಕ ರಾಜ್ಯದ ಪ್ರಸಿದ್ಧ ಸುಗಮ ಸಂಗೀತ ಗಾಯಕಿ. ಹಾಗೆಯೇ ಇವರು ನಟನೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇವರು ಸಂಗೀತ ನಿರ್ದೇಶಕರಾದ ಅರುಣ್ ಅವರನ್ನು ಮದುವೆಯಾಗಿರುತ್ತಾರೆ. ದುನಿಯಾ ಚಲನಚಿತ್ರದಲ್ಲಿ ಇವರು ಹಾಡಿರುವ "ನೋಡಯ್ಯ ಕ್ವಾಟೇ ಲಿಂಗವೇ" ಹಾಡಿಗೆ ೨೦೦೭ನೇ ವರ್ಷದ ಉತ್ತಮ ಹಿನ್ನಲೆ ಗಾಯಕಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ

ಹೆಚ್ಚಿನ ಮಾಹಿತಿ

ಗಂಗಾವತಿ ಪ್ರಾಣೇಶ್

ಗಂಗಾವತಿ ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟೆಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಲಬುರ್ಗಿಯಲ್ಲೂ, ಬಿ. ಕಾಂ ಪದವಿಯನ್ನು ಗಂಗಾವತಿಯಲ್ಲೂ ಪಡೆದರು. ತಂದೆ ಸ್ವಾತಂತ್ರ್ಯಯೋಧರಾದ ಶ್ರೀ ಬಿ. ವೆಂಕೋಬಾಚಾರ್ಯರು ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿಬಾಯಿ ಅವರಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡ ಪ್ರಾಣೇಶ್ 1982ರಿಂದ ಸಾಹಿತ್ಯದ ರಸಾಸ್ವಾದದಲ್ಲಿ ಮೀಯತೊಡಗಿದರು.ಬೀchi ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್, ಆ ಸಾಹಿತ್ಯದಲ್ಲಿರುವ ಹಾಸ್ಯವನ್ನು ಮೈಗೂಡಿಸಿಕೊಂಡು ಅದನ್ನೇ ಇತರರಿಗೆ ಹಂಚುವ ಕಾಯಕವನ್ನು 1994ರಿಂದ ಆರಂಭಿಸಿದರು. ‘ಹಾಸ್ಯಸಂಜೆ’ ಎಂಬ ವಿನೂತನವಾದ ಹಾಸ್ಯಕ್ಕೇ ಮೀಸಲಾದ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದ ಕೀರ್ತಿ ಪ್ರಾಣೇಶರಿಗೆ ಸಲ್ಲುತ್ತದೆ.

ಹೆಚ್ಚಿನ ಮಾಹಿತಿ

ಸುಧಾ ಮೂರ್ತಿ

ಸುಧಾಮೂರ್ತಿ ಕನ್ನಡ ಮತ್ತು ಇಂಗ್ಲಿಷ್ನ ಬರಹಗಾರ್ತಿ, ಮೂರ್ತಿ ತಮ್ಮ ವೃತ್ತಿಪರ ವೃತ್ತಿಯನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಆರಂಭಿಸಿದರು. ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಮತ್ತು ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ.ಇವರು ೧೯೫೦ರಲ್ಲಿ ಧಾರವಾಡ ಜಿಲ್ಲೆಯ 'ಶಿಗ್ಗಾಂವ್‌' (ಜಿಲ್ಲೆಯ) (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ೧೯೫೦ ರ ಆಗಸ್ಟ್‌ ೧೯, ರಂದು ಜನಿಸಿದರು. ಜಯಶ್ರೀ ದೇಶಪಾಂಡೆ ಸುಧಾಮೂರ್ತಿಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.

ಹೆಚ್ಚಿನ ಮಾಹಿತಿ

ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕರು, ಅಂಕಣಕಾರರು. ಸಾಮಾಜಿಕ ಕಾರ್ಯಕರ್ತರಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.ಹುಟ್ಟಿದ್ದು ಏಪ್ರಿಲ್ ೯, ೧೯೮೦ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ. ಮಿಥುನ್ ಚಕ್ರವರ್ತಿ ಅಂತಲೂ ಕರೆಯಲ್ಪಡುವ ಇವರು ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರುವ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಒಂದು ಸಣ್ಣ ಗ್ರಾಮದಲ್ಲಿ. ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಡಿ.ಎಸ್.ಶೇಟ್ ರವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಹೆಚ್ಚಿನ ಮಾಹಿತಿ

ಟಿ.ಎನ್.ಸೀತಾರಾಂ

ಟಿ ಎನ್ ಸೀತಾರಾಂ [೧] ಎಂದು ಪ್ರಸಿದ್ಧರಾಗಿರುವ ಬಹುಮುಖ ವ್ಯಕ್ತಿತ್ವದ ಕಲಾವಿದನ ಮನೆಯ ಹೆಸರುಟಿ.ಎನ್.ನಾರಾಯಣರಾವ್ ಸೀರಾರಾಂ ಎಂದು. (ಡಿಸೆಂಬರ್, ೦೬, ೧೯೪೮) ಇವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ. ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ್ದರು. ಇವರು ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು.ಟಿ.ಎನ್. ಸೀತಾರಾಂ ಅವರು ಲಂಕೇಶ್ ಪತ್ರಿಕೆ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು. ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ಹೆಚ್ಚಿನ ಮಾಹಿತಿ

ಸುಧಾ ಬರಗೂರು

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಸುಧ ಬಾರಗರ್ , ಕರ್ನಾಟಕದ ಪ್ರಖ್ಯಾತ ಹಾಸ್ಯಗಾರ (ನಿಂತಾಡುವ ಹಾಸ್ಯ). ತನ್ನ ಬಾಲ್ಯದಿಂದಲೇ, ಶಾಲಾ ಮಟ್ಟದಿಂದ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಸರಿಯಾಗಿ, ಅವರು ಡೆಬ್ಯೂಟರ್ ಆಗಿ 1000 ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅವರು ಅನೇಕ ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ಹೊಂದಿದ್ದ ಒಬ್ಬ ಪ್ರಸಿದ್ಧ ನಿರರ್ಗಳ ವಾಗ್ಮಿ. ಹಾಸ್ಯದ ಕಡೆಗೆ ಆಕೆಯ ಆಕರ್ಷಣೆಯು ದ್ರವ್ಯರಾಶಿಗಳನ್ನು ಸೆಳೆದಿದೆ, ಅದರ ಮೂಲಕ ಅವರು ನಮ್ಮ ದಿನ ದಿನ ಜೀವನಕ್ಕೆ ಅಗತ್ಯವಿರುವ ಮಾನವ ಮೌಲ್ಯಗಳನ್ನು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿ

ಬಿ.ಆರ್.ಲಕ್ಷ್ಮಣ್ ರಾವ್

ಬಿ.ಆರ್.ಲಕ್ಷ್ಮಣ್ ರಾವ್ ಇವರು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು ಮತ್ತು ಅವರ ನಿವೃತ್ತಿ ತನಕ ಬೋಧಕನಾಗಿ ಕೆಲಸ ಮಾಡಿದರು. ಕಾದಂಬರಿಗಳು, ಕವನಗಳು, ನಾಟಕಗಳು ಮತ್ತು ಹಾಡುಗಳಂತಹ ವಿವಿಧ ವಿಭಾಗಗಳಲ್ಲಿ ಅವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1981), ಗೋರುರು ಸಾಹಿತ್ಯ ವಿದ್ಯಾಶಾಚಿ (1998), ಚುತುಕು ರತ್ನ ಪ್ರಶಸ್ತಿ (1998) ಮತ್ತು ವಿಶ್ವೇಶ್ವರಯ ಸಾಹಿತ್ಯ ಸಾಹಿತ್ಯ (2000) ಇಂತಹ ಮುಂತಾದ ಪ್ರಸಿದ್ಧ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ.