ರಾ.ವಿ.ತಾಂತ್ರಿಕ ಮಹಾವಿದ್ಯಾಲಯ

ಕನ್ನಡ ಸಂಘ

ತಾಂತ್ರಿಕ ಮನಸ್ಸಿನಲ್ಲಿ ಕನ್ನಡದ ಮಿಡಿತ.

ಇಲ್ಲಿ ನೋಂದಾಯಿಸಿ

ನಾವ್ಯಾರು ?

ತಾಂತ್ರಿಕ ಜಗತ್ತಿನ ಸವಾಲುಗಳ ಮಧ್ಯೆ ಕರುನಾಡಿನ ಭಾಷೆ , ಕಲೆ , ಸಂಸ್ಕೃತಿ , ಸಾಹಿತ್ಯದ ಕಂಪನ್ನು ಪಸರಿಸುವ ಪ್ರತಿಜ್ಞೆಯೊಂದಿಗೆ ಮೂರು ದಶಕಗಳ ಹಿಂದೆ ಜನ್ಮತಳೆದ ರಾ.ವಿ.ತಾಂ.ಮ ಕನ್ನಡ ಸಂಘವು ಇಂದು ಹೆಮ್ಮರವಾಗಿ ಬೆಳೆದುನಿಂತಿದೆ. ತಾಂತ್ರಿಕ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ನಮ್ಮ ವಿದ್ಯಾಲಯದಲ್ಲಿ, ಶೈಕ್ಷಣಿಕ ಪ್ರಭುದ್ದತೆಯ ಜೊತೆಗೆ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಮೇಳೈಸುವುದೇ ನಮ್ಮ ಇರುವಿಕೆಗೆ ಇಂಬು. ಅಧ್ಯಾಪಕರು ಮತ್ತು ವಿಧ್ಯಾರ್ಥಿಗಳ್ಳಲ್ಲಿನ ಕ್ರಿಯಾಶೀಲತೆ, ದೃಢಚಿತ್ತತೆ, ಕಾರ್ಯಪ್ರವೃತ್ತತೆಯನ್ನು, ಬಳಿಸಿಕೊಂಡು ಸೃಜನಶೀಲ ಸಂಶೋಧನೆಯಲ್ಲಿ ಕನ್ನಡ ಸಂಘವು ತನ್ನದೆಯಾದ ಭಾಪನ್ನು ಒತ್ತಿದೆ. ಯುವಪೀಳಿಗೆಯಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಗಳು, ವಾಗ್ಮಿಗಳಿಂದ ಹಲವು ವಿಷಯಗಳ ಬಗೆಗಿನ ಪರಿಚಯಾತ್ಮಕ, ಪಾಂಡಿತ್ಯಪೂರ್ಣ ಉಪನ್ಯಾಸಗಳು, ಇಂಪಾದ ಸಂಗೀತ ಲಹರಿಗಳನ್ನು ಏರ್ಪಡಿಸುವಲ್ಲಿ ನಮ್ಮ ಹೆಜ್ಜೆಗುರುತನ್ನು ಮೂಡಿಸಿದೆ


ಸಂಪರ್ಕಿಸಿ