ಮುಖಪುಟ

ಕನ್ನಡ ಸಂಘ

ತರಂಗ

ಆಚರಣೆಯ ವರ್ಷ: ೨೦೧೭

ನಾಟ್ಯ ತರಂಗ,ನಾದ ತರಂಗ,ಗಾನ ತರಂಗ ಎಲ್ಲೆಡೆ ಪಸರಿರುವುದು ತರಂಗ 2017-18 ಸಾಲಿನ ಕನ್ನಡ ಹಬ್ಬ. ತರಂಗ ಅದ್ದೂರಿಯಾಗಿ ತನ್ನದೇ.ಆದ.ಶೈಲ್ಲಿಯಲ್ಲಿ ಕನ್ನಡಾಭಿಮಾನವನ್ನು ಬೆಳಗಿದೆ ಅತಿಥಿಗೋಷ್ಠಿ,ಸನ್ಮಾನ,ನೃತ್ಯ, ನಾಟಕ,ಸಂಗೀತಗಳ ತರಂಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮನಸೋಇಚ್ಛೆಯಿಂದ ಆನಂದಿಸಿದರು.ಕಹಳೆ

ಆಚರಣೆಯ ವರ್ಷ:೨೦೧೬

26,2016 ಅಕ್ಟೋಬರ್ ಕಾಲೇಜಿನ ಮೂಲೆ ಮೂಲೆಯಲ್ಲಿ ಆವತ್ತು.. ಕನ್ನಡ ಕನ್ನಡ ಎಂಬ ಸದ್ದು ಕಹಳೆಯ ರೂಪದಿ ಹರಡಿತ್ತು.. ನೆರೆದಿದ್ದವರ ಮೂಕವಿಸ್ಮಿತಗೊಳಿಸಿತ್ತು ವೇದಿಕೆಯ ಗತ್ತು.. ಕನ್ನಡದ ಕಂಪನ ಮೈಮನ ತಣಿಸಿತ್ತು ಆವತ್ತು.. ಇದೇ ಕಣ್ರಿ ಕನ್ನಡದ ಗತ್ತು.. ನಮ್ಮೀ ರಾ.ವಿ.ತಾಂ.ಮ ಕನ್ನಡ ಸಂಘದ ತಾಕತ್ತು...ಕಾರಂಜಿ

ಆಚರಣೆಯ ವರ್ಷ:೨೦೧೫

ಭಾವನೆಗಳು ಮನಸ್ಸಿನಲ್ಲಿ ಕಾರಂಜಿಯಂತೆ ಚಿಮ್ಮುತ್ತಿರಲು ಮನಮನಗಳ ನಡುವೆ ಉಲ್ಲಾಸ ತರಲು ಕನ್ನಡ ಹಬ್ಬ "ಕಾರಂಜಿ"ಯಂತೆ ಚಿಮ್ಮಿತು ಮೆರಗನ್ನು ಹುಟ್ಟಿಸುವ ಈ ಹಬ್ಬವು ಕನ್ನಡ ಸಂಘದ ಸ್ವಪ್ನದ ಪ್ರತೀಕ,ಶ್ರಮದ ಪ್ರತಿಫಲತಾಂಡವ

ಆಚರಣೆಯ ವರ್ಷ:೨೦೧೪

ಶಿವನು ಕೈಲಾಸದಲ್ಲಿ ತಾಂಡವ ನಾಟ್ಯಮಾಡುತಿರಲು ಆರ್ ವಿ ಕಾಲೇಜಿನಲ್ಲಿ ಕನ್ನಡ ಹಬ್ಬ 'ತಾಂಡವ' ಹೆಸರಿಂದ ನರ್ತಿಸುತ್ತಿತ್ತು. ಹಗಲುರಾತ್ರಿಯೆನ್ನದೆ ವಿಧ್ಯಾರ್ಥಿಗಳು ಶ್ರಮಪಟ್ಟು ವೇದಿಕೆ ರಚಿಸಿದರು.ಸಾಂಸ್ಕೃತಿಕ ಕಾರ್ಯಕ್ರಮಗಳು ಸೊಬಗನ್ನು ಹೆಚ್ಚಿಸಿದವು.ಸುವರ್ಣ ಸಂಭ್ರಮ

ಆಚರಣೆಯ ವರ್ಷ:೨೦೧೩

ಶ್ರೀಕೃಷ್ಣದೇವರಾಯನ ಕಾಲ ಸುವರ್ಣಯುಗವೆಂದು ಖ್ಯಾತಿಪಡೆದಿದ್ದರೆ ನಮ್ಮ ಕನ್ನಡ ಹಬ್ಬವು ಕಾಲೇಜಿನ ಸುವರ್ಣ ಕಿರೀಟದಂತೆ ರಾರಾಜಿಸುವುದು.ಪ್ರತಿ ವರ್ಷದಂತೆ ನಡೆಯುವ ಹಬ್ಬದ ಮೆರಗನ್ನು ಹೆಚ್ಚಿಸಲು ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.ಹಣತೆ

ಆಚರಣೆಯ ವರ್ಷ:೨೦೧೨

ಹಚ್ಚೇವು ಕನ್ನಡದ ಹಣತೆ... ಜಿದ್ದಿನಿಂದಲ್ಲ, ಅಭಿಮಾನದಿಂದ ಎಣ್ಣೆ ಇಲ್ಲದ ದೀಪ ಉರಿಯಲಾಗದು ಹಾಗೆ ವಿದ್ಯಾರ್ಥಿಗಳ ಸಹಕಾರ ಮತ್ತು ಶ್ರಮವಿಲ್ಲದೆ ಹಬ್ಬವಿಲ್ಲ.ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು,ಸ್ಪರ್ಧೆಗಳು ಹಬ್ಬದ ಸೊಬಗನ್ನು ಹೆಚ್ಚಿಸಿದವು.ತೇರು

ಆಚರಣೆಯ ವರ್ಷ:೨೦೧೧

ಕೈ ಮುಗಿದು ಏರು ಇದು ಕನ್ನಡದ ತೇರು ಸರ್ವರನ್ನು ಸಮಾನ ದೃಷ್ಟಿಯಿಂದ ಕಾಣುವ ತೆರು ಸೊಬಗಿನ ಬೀಡು, ಮನು ಸಂಕುಲದ ಗೂಡು,ಜ್ಞಾನದ ಸೊಗಡು,ಈ ಕನ್ನಡ ನಾಡು,ಕಾಲೇಜಿಗೆ ಮೆರಗು ನೀಡಿದ್ದು ಕನ್ನಡದ ತೇರು.ಹೆಸರಿನಲ್ಲಿ ಇಷ್ಟು ಗಮ್ಮತ್ತಿರಬೇಕಾದರೆ ಇನ್ನೂ ಹಬ್ಬ ಹೇಗಿರಬೇಕೆಂದು ನೀವೇ ಯೋಚಿಸಿ.ಝೇಂಕಾರ

ಆಚರಣೆಯ ವರ್ಷ:೨೦೧೦

ಪ್ರೀತಿಯ ಮಮಕಾರ,ಮನಸ್ಸಿಗೆ ಸಹಕಾರ, ‌ಅಳಿಸಲ್ಪಡುವುದು ಅಂಧಕಾರ,ಕಲೆ ಸಂಸ್ಕೃತಿಗಳ ಆಗರ ಈ ಕನ್ನಡದ ಝೇಂಕಾರ.ಸುಗ್ಗಿ

ಆಚರಣೆಯ ವರ್ಷ:೨೦೦೯

ಕನ್ನಡಕ್ಕೆ ಹೊರಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದಾ ಎಂಬ ಕನ್ನಡಮ್ಮನ ಹರಕೆ ತೀರಿಸಲು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕನ್ನಡ ಹಬ್ಬವನ್ನು "ಸುಗ್ಗಿ" ನಾಮದ ಮೂಲಕ ವಿಜೃಂಭಣೆಯಿಂದ ಆಚರಿಸಲಾಗಿತ್ತು.


ಚಿಗುರು

ಆಚರಣೆಯ ವರ್ಷ:೨೦೦೮

ಹೊಸ ಎಲೆಗಳು ಚಿಗುರಿದಂತೆ ಹೊಸ ಚಿಂತನೆಗಳು ಮೊಳಕೆಯೊಡೆದಂತೆ ಕನ್ನಡಿಗರ ಸಮಾಗಮನಕ್ಕೆ ಈ ಕನ್ನಡ ಹಬ್ಬ ಚಿಗುರೊಡೆಯುವುದು ಚಿಗುರು ಎಂಬ ಹೆಸರಿನಿಂದ ಎಲ್ಲ ಹಬ್ಬವಿಲ್ಲ.ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ಬೇರಾಯಿತುಮಂಥನ

ಆಚರಣೆಯ ವರ್ಷ:೨೦೦೭

ನಮ್ಮೆಲ್ಲರ ಮನಗಳಿಗೆ ಕನ್ನಡದ ಏಳಿಗೆಯ ಚಿಂತನೆಗಳನ್ನು ಬಿತ್ತಿ ಮಂಥನ ಎಂಬ ಹೆಸರಿನೊಂದಿಗೆ ಕನ್ನಡ ಹಬ್ಬ ಮೂಡಿ ಬಂದಿತು.ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು,ಸ್ಪರ್ಧೆಗಳು ಹಬ್ಬದ ಸೊಬಗನ್ನು ಹೆಚ್ಚಿಸಿದವು